Advertisement

Month: January 2025

“ಡೀಲ್‌” ಬೆನ್ನಟ್ಟಿದ ಕುರಿಗಳು ಸಾರ್‌ ಕುರಿಗಳು: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂಭತ್ತನೆಯ ಬರಹ

Read More

ಪೆಟ್ಟಿಗೆ ಅಂಗ್ಡೀಲಿ ಪೈಸಾ ಲೆಕ್ಕ: ಸುಮಾ ಸತೀಶ್ ಸರಣಿ

ಮಾರೋನು ವಾರಕ್ಕೊಂದು ದಪ ಇಸ್ಕೂಲ್ ತಾವ ಬತ್ತಿದ್ದ. ಅದು ಎಲ್ಡು ತರ ಇರ್ತಿತ್ತು. ಒಂದು ಈಗ್ಲೂ ಸಿಗ್ತೈತೆ. ಅದೇ ಮೊಳಕೈ ಉದ್ದುದ್ದು ಕಡ್ಡೀಗೆ ರೋಜಾ(ಗುಲಾಬಿ) ಬಣ್ಣುದ್ದು ಹತ್ತಿ ತರ ಸುತ್ತಿರ್ತಾರಲ್ಲ. ಕೈಗೂ ಬಾಯ್ಗೂ ಅಂಟ್ರುಸ್ತೈತಲ್ಲ ಅದು. ಇನ್ನೊಂದು ರಬ್ಬ್ರು(ರಬ್ಬರ್) ತರ ನಾರಿನಂಗೆ ಇರ್ತಿತ್ತು. ಎಳುದ್ರೆ ಸಾಗ್ತಾನೆ(ಹಿಗ್ಗುವ) ಇರಾ ದಾರ. ಅದುನ್ನ ಕೈಗೆ ವಾಚೋ, ಇಮಾನವೋ, ಸೈಕಲ್ಲೋ, ಕಾರೋ ಮಾಡಿ ಹಾಕೋನು. ಬೇಸಾಗಿ ಮಾಡ್ತಿದ್ದ. ಕಾಸು ಕಮ್ಮಿ ಇದ್ರೆ ಬೆಟ್ಟಿಗೆ ಉಂಗುರ ಮಾತ್ರ ಸಿಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಹಾಗೆಯೇ ಹಿಸುಕತೊಡಗಿದೆ
ಅದನು ಬಲವಾಗಿ
ಪಕಳೆ ಪಕಳೆಗಳು ಮುದ್ದೆಯಾಗುವಂತೆ
ಕೈಗೆ ತಾಕಿದ ಮುಳ್ಳು
ಚಿಮ್ಮಿಸಿದ ರಕ್ತ
ಬರೆಯಿತೊಂದು ಹೊಸ ಷರಾ
ನಿನ್ನ ಕುತ್ತಿಗೆಯನ್ನೇ
ಹಿಸುಕುತ್ತಿದ್ದೀಯೇ ಜೋಕೆ!
ನಿಜಕ್ಕೂ ಬೆಚ್ಚಿಬಿದ್ದೆ!” -ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಗಣಿತ ಟ್ಯೂಷನ್ನಿನ ಹಾಸ್ಯ ಪ್ರಸಂಗಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ಸುಧಾಕರನ ಅಣ್ಣನ ದಿನಚರಿಯೇ ವಿಶೇಷ ಎನಿಸುತ್ತಿತ್ತು. ಅವರು ಮಿತ ಭಾಷಿ, ಏಕಾಂಗಿಯಾಗಿರ್ತಾ ಇದ್ರು. ರಾತ್ರಿ 10 ಕ್ಕೆ ಓದಲು ಕುಳಿತರೆ ಬೆಳಗಿನ ಜಾವ 5 ಗಂಟೆಯವರೆಗೂ ಓದೋದು. ಮತ್ತೆ 5 ಕ್ಕೆ ಮಲಗಿ 10 ಗಂಟೆಗೆ ಎದ್ದು ಕಾಲೇಜಿಗೆ ಹೋಗೋರು. ಇದೇ ರೀತಿಯಾಗಿ ನಮ್ಮ ಹಾಸ್ಟೆಲ್ಲಿನ ಎಂಜಿನಿಯರಿಂಗ್ ಹುಡುಗರು ಓದ್ತಾ ಇದ್ರು. ಈ ರೀತಿ ರಾತ್ರಿಯಿಡೀ ಓದೋಕೆ ‘ನೈಟ್ ಔಟ್ ಮಾಡೋದು’ ಎಂಬ ಪದ ಬಳಸ್ತಾ ಇದ್ರು. ಹಾಸ್ಟೆಲ್ಲಿನ ಮಧ್ಯಭಾಗದಲ್ಲಿದ್ದ ಫೀಲ್ಡಿನಲ್ಲಿ ಸ್ಟಡಿ ಚೇರ್ ಹಾಕ್ಕೊಂಡು ಕುಳಿತು ಓದೋಕೆ ಶುರು ಮಾಡ್ತಿದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ