Advertisement

Month: January 2025

ಒಡೆದದ್ದನ್ನು ಇಡಿಯಾಗಿಸಿಕೋ ಮೆಕ್ಸಿಕೋ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಹಿಂಗೊಂದಿತ್ತು ಕಾಲ…: ವಸಂತಕುಮಾರ್‌ ಕಲ್ಯಾಣಿ ಬರಹ

ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ವಸಂತಕುಮಾರ್‌ ಕಲ್ಯಾಣಿ ಬರಹ ನಿಮ್ಮ ಓದಿಗೆ

Read More

ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್‌-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ

“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ

ಒಮ್ಮೆ ನಾವಿಬ್ಬರೂ ಮಾತನಾಡುವ ಪ್ರಸಂಗ ಬಂದಾಗ ನಾನು ನನ್ನ ಕುಲದ ಬಗ್ಗೆ ಹೇಳಿದೆ; ಆ ಸಾಂಪ್ರದಾಯಿಕ ಬೇಲಿಯನ್ನು ಹಾರಬೇಕೆಂಬ ಆಸೆಯನ್ನು ತೋಡಿಕೊಂಡೆ. ಬಿಸಿ ರಕ್ತ, ವಿಚಾರವಂತಿಕೆಯ ಮೆದುಳು ಅವನಿಗೆ ಬಲ ತುಂಬಿತ್ತು. ಊರಿನ ಹಿರೀಗೌಡನಾದರೋ ಸರ್ವಾಂಗ ಸುಂದರಿ-ತೊಳೆದ ಮುತ್ತಿನಂತಿದ್ದ ನನ್ನನ್ನು ನೋಡಿ ಜೊಲ್ಲು ಸುರಿಸಿದ್ದು ತಿಳಿದ ದಿನ ಮೈಮೇಲೆ ಹಾವು-ಚೇಳು ಹರಿದಂತಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ “ನಾ ಸಾಯಬೇಕು…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ