ಹುಚ್ಚಾಟಗ್ಳು: ಸುಮಾ ಸತೀಶ್ ಸರಣಿ
ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ