Advertisement

Month: January 2025

ವ್ಯಕ್ತಮಧ್ಯದ ಬಿಂದುವೊಂದರಲ್ಲಿ ನಿಂತು…: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಮೇ ತಿಂಗಳ ಹದಿನೇಳನೇ ತಾರೀಖು ನನ್ನ ಬಹುಕಾಲದ ಕನಸು ನನಸಾದ ದಿನ. ಪಿಎಚ್.ಡಿ. ವಿದ್ಯಾರ್ಥಿ ಎಂದೆನಿಸಿಕೊಂಡು ಅದಾಗಲೇ ಏಳು ವರ್ಷ ಕಳೆದಿತ್ತು. ಮಹಾಪ್ರಬಂಧ ಸಿದ್ಧಪಡಿಸಿ, ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವರ್ಷ ಒಂದಾಗಿತ್ತು. ನನ್ನ ಸಂಶೋಧನೆಗೆ ಅರ್ಥಪೂರ್ಣ ಮುಕ್ತಾಯವೊಂದು ದೊರಕುವುದಿಲ್ಲವೋ ಏನೋ ಎಂಬ ಆತಂಕ ಹೃದಯವನ್ನೊತ್ತಿ ನಿಂತಿತ್ತು. ಆ ಕ್ಷಣದಲ್ಲಿಯೇ ಮುಕ್ತ ಮೌಖಿಕ ಪರೀಕ್ಷೆಗೆ ಕರೆಬಂದದ್ದು. ಮೇ ಹದಿನೇಳರಂದು ನಾನು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕಿತ್ತು. ಅದಕ್ಕೂ ಎರಡು ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟು ಬೆಳ್ಳಂಬೆಳಗ್ಗೆಯೇ ಆಸ್ಪತ್ರೆ ಸೇರಿಕೊಳ್ಳುವಂತಾಯಿತು. ಒಂದು ವಾರ ಆಸ್ಪತ್ರೆಯಲ್ಲಿಯೇ ಇರದೆ ಬೇರೆ ದಾರಿಯಿರಲಿಲ್ಲ.
ಹೊಸ ವರ್ಷಕ್ಕೆ ಹಳೆಯ ನೆನಕೆಗಳೊಂದಿಗೆ ಡಾ. ವಿಶ್ವನಾಥ ನೇರಳಕಟ್ಟೆ ಬರಹ

Read More

ಒಂದೊಂದ್ಲೆ ಒಂದು…!: ಕ್ಷಮಾ ವಿ ಭಾನುಪ್ರಕಾಶ್ ಬರಹ

ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು?
ಈ ಹೊಸ ವರ್ಷದಿಂದ ಸ್ವಲ್ಪವಾದರೂ ನಾವು ನಿಂತಿರುವ ಈ ಭೂಮಿಯ ಕುರಿತು ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬಹುದು ಎನ್ನುವುದರ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ

Read More

ನಮ್ಮನ್ನಗಲಿದ ಪ್ರೊ. ಮುಜಫ್ಫರ್ ಅಸ್ಸಾದಿ: ರಂಜಾನ್ ದರ್ಗಾ ಸರಣಿ

ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ. ಸ್ತ್ರೀವಾದದ ಕುರಿತು ಬರೆದಿದ್ದಾರೆ. ನಾಗರಹೊಳೆ ಬುಡಕಟ್ಟು ಜನರ ಪುನರ್ವಸತಿ ಕುರಿತು ಸಮಿತಿಯ ಮುಖ್ಯಸ್ಥರಾಗಿ ವರದಿ ಒಪ್ಪಿಸಿದ್ದಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯ ಎಡವಟ್ಟಿನ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ