ನೆತ್ತರ ಇತಿಹಾಸ ಕೇಳಿ, ಕೈಬಿಟ್ಟ ಬಳೆಗಳು
ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ