Advertisement

Tag: ಎಚ್. ಗೋಪಾಲಕೃಷ್ಣ

ಸಾಂಸ್ಕೃತಿಕ ಲೋಕಕ್ಕೆ ವೇದಿಕೆಯಾಗಿದ್ದ ನಗರ…

ಪವರ್ ಹೌಸ್ ಹಿಂಭಾಗವೇ ಶಿವನ ಹಳ್ಳಿ. ಆಗ ಅರವತ್ತರ ದಶಕದಲ್ಲಿ ಒಂದು ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಇವೆರೆಡರ ಮಧ್ಯೆ ಹಾದು ಹೋಗುತ್ತಿತ್ತು. ಪೂರ್ತಿ ಏರಿಯಾ ರೆವೆನ್ಯೂ ನಿವೇಶನಗಳು. ಅರವತ್ತು ನೂರರ ಸೈಟುಗಳು ಐನೂರು ಆರು ನೂರು ರೂಪಾಯಿ. ಸುಮಾರು ಜನ ನಿವೇಶನ ಕೊಂಡವರು ರೆವೆನ್ಯೂ ಆಸ್ತಿ, ಸೈಟು ರೋಡ್ ಆಗುತ್ತೆ ಅಂತ ಹೆದರಿ ಮಾರಿದರು. ಎಷ್ಟೋ ಜನರಿಗೆ ಈ ರೀತಿ ಆಗಿ ಆಗಿ ಹೆದರಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ನಮ್ಮ ಕಾಲೋನಿಯ ಮೊದಲ ಸಾವು…

ನಮ್ಮ ಎದುರು ರಸ್ತೆಯ ಎಚ್ ಎಂ ಟಿ ಕೆಲಸಗಾರ ಗೋಪಾಲರಾವ್ ಎನ್ನುವವರು ಕೊಂಚ ಮೈ ಬಿಸಿ, ಜರ ಬಂದಿದೆ ಎಂದು ವೈದ್ಯರಿಗೆ ತೋರಿಸಲು ಹೋದರು. ವೈದ್ಯರು ಚಿಕಿತ್ಸೆ ನೀಡಬೇಕಾದರೆ ಅಂದರೆ ಇಂಜೆಕ್ಷನ್ ಕೊಟ್ಟಾಗ ಅವರ ಜೀವ ಹೋಯಿತು. ವೈದ್ಯರ ನಿರ್ಲಕ್ಷ್ಯ ಎಂದು ಕಾರ್ಮಿಕರು ಕೋಪಾವೇಶಗೊಂಡರು. ಈ ಎಸ್ ಐ ಆಸ್ಪತ್ರೆ ಮುಂದೆ ಕಾರ್ಮಿಕ ಸಾಗರ ನೆರೆಯಿತು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂರನೇ ಕಂತು ನಿಮ್ಮ ಓದಿಗೆ

Read More

“ರಾಜಾಜಿನಗರ” ಹೆಸರಿನ ಚರಿತ್ರೆ ಗೊತ್ತಾ?

ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎರಡನೇ ಕಂತು ನಿಮ್ಮ ಓದಿಗೆ

Read More

ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು…. ಎಚ್. ಗೋಪಾಲಕೃಷ್ಣ ಬರಹ

Read More

ಶಾಲಾ ಕಾಲೇಜು ದಿನಗಳ ಮೆಲುಕು

ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್‌ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು.
ಶಾಲಾ ಕಾಲೇಜು ಮೇಷ್ಟರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಚ್. ಗೋಪಾಲಕೃಷ್ಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ