Advertisement

Tag: ಎಚ್. ಗೋಪಾಲಕೃಷ್ಣ

ಬೆಂಗಳೂರ ಸ್ಮಶಾನಗಳಲ್ಲೊಂದು ಸುತ್ತು: ಎಚ್. ಗೋಪಾಲಕೃಷ್ಣ ಸರಣಿ

ದೇವರನ್ನು ಇಟ್ಟಿದ್ದ ಗರ್ಭಗುಡಿಗೆ ದೀಪ ಇಲ್ಲ. ಗರ್ಭ ಗುಡಿಗೆ ದೀಪ ಹಾಕದೇ ಕತ್ತಲಲ್ಲಿ ದೇವರನ್ನು ಹುಡುಕುವ ಪ್ರಯೋಗ ನಮಗೆ ಬಹುಶಃ ಕೇರಳದ ಕೊಡುಗೆ ಇರಬೇಕು. ಅಲ್ಲಿನ ಪದ್ಮನಾಭ ದೇವರ ದೇವಸ್ಥಾನದಲ್ಲಿ ಲೈಟು ಇಲ್ಲ ಮತ್ತು ಎಷ್ಟೇ ರಶ್ಷು ಇದ್ದರೂ ಜನ ಕತ್ತಲಲ್ಲೇ ದೇವರನ್ನು ಹುಡುಕಬೇಕು. ಹೊರಗಿನ ಪ್ರಾಂಗಣದಲ್ಲಿ ನಿಂತು ದೇವರು ಅಲ್ಲಿದ್ದಾನೆ ಅಂತ ನೋಡಿದ್ದು ಅಷ್ಟೇ.

Read More

ಬೆಂಗಳೂರಿನ “ಸ್ಮಶಾನ”ದ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಆಗಿನ್ನೂ ಶವ ವಾಹನ ಇರಲಿಲ್ಲ. ಬದಲಿಗೆ ಟ್ರಾಕ್ಟರ್, ಎತ್ತಿನ ಗಾಡಿ ಅಥವಾ ಜಟಕಾ ಗಾಡಿಯನ್ನು ಕೆಲವರು ಉಪಯೋಗಿಸಿದರೆ ಮತ್ತೆ ಸುಮಾರು ಜನ ಹೆಣ ಹೊತ್ತು ಹೋಗುವರು. ನಮ್ಮ ಕಾಲೋನಿಯ ಕೆಲವು ಕಾರ್ಮಿಕರು ಅವರದ್ದೇ ಒಂದು ಗುಂಪು ಮಾಡಿಕೊಂಡು ಯಾವುದಾದರೂ ಸಾವಿನ ಸುದ್ದಿ ಬಂದಕೂಡಲೇ ಶವ ಸಾಗಿಸಲು ಹೆಗಲು ಕೊಡಲು ಸಿದ್ಧರಿರುತ್ತಿದ್ದರು. ಚಟ್ಟ ಕಟ್ಟುವ ಸ್ಪೆಷಲಿಸ್ಟ್‌ಗಳೂ ಸಹ ಇದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಗ್ರಹಣವೆಂದವರ “ಗ್ರಹಚಾರ” ಬಿಡಿಸುತ್ತಿದ್ದವರು ನಾವು!: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಅಣ್ಣ ಫಿಲ್ಮ್ ರೋಲ್ ಅನ್ನ ಅವನ ಸ್ನೇಹಿತರ ಮೂಲಕ ಮಿಲಿಟರಿ ಕ್ಯಾಂಟೀನ್‌ನಿಂದ ತರಿಸುತ್ತಿದ್ದ. ಹತ್ತು ರೂಪಾಯಿ ಕಡಿಮೆ ಬೀಳೋದು. ಆಗಲೇ ನನ್ನ ಫೋಟೋ ನಾನೇ ತೆಗಿತಿದ್ದೆ, ಈಗಿನ ಸೆಲ್ಫಿ ಹಾಗೇ. ಕ್ಯಾಮೆರಾ ತಿರುಗಿಸಿ ನನ್ನ ಮುಖ ಅಂದಾಜಿನ ಮೇಲೆ ಲೆನ್ಸ್ ಎದುರು ಇಟ್ಟುಕೊಂಡು ಕ್ಲಿಕ್ ಮಾಡೋದು. ಸೆಲ್ಫಿ ಕಲ್ಪನೆ ಆಗಲೇ ನಾನು ಕಂಡು ಹಿಡಿದಿದ್ದೆ. ಅದು ಚರಿತ್ರೆಯಲ್ಲಿ ಎಲ್ಲೂ ದಾಖಲು ಆಗಲಿಲ್ಲ, ನನ್ನ ಎಷ್ಟೋ ಇನ್ವೆನ್ಷನ್‌ಗಳ ಹಾಗೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

“ಶಿವಗಂಗೆ” ಹತ್ತಿದ ನೆನಪುಗಳು: ಎಚ್. ಗೋಪಾಲಕೃಷ್ಣ ಸರಣಿ

ಕಡಲೆಕಾಯಿ ತಿನ್ನುತ್ತಾ ಹಾದಿ ಸವೆಯಿತು. ಸೌತೆಕಾಯಿ, ಬಾಳೆಹಣ್ಣು ಕಡಲೆಕಾಯಿ ನಂತರ ಖಾಲಿ. ಬೆಟ್ಟದ ಬುಡ ಸೇರುವಷ್ಟರಲ್ಲಿ ಕೈ ಖಾಲಿ ಆಗಿ ನಿರಾಳ ಅನಿಸಿತ್ತು. ಅಲ್ಲೂ ಎರಡೋ ಮೂರೋ ಗೋಲಿ ಸೋಡಾ ಕುಡಿದೆವು. ಬೆಟ್ಟ ಏರಲು ಶುರು ಹಚ್ಚಿದೆವು. ತುಂಬಾ ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಮೆಟ್ಟಲು ತರಹ ಮಾಡಿ ಹತ್ತುವವರಿಗೆ ಅನುಕೂಲ ಆಗಲಿ ಅಂತ ಪೈಪು ಹಾಕಿದ್ದಾರೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಸಂಡೇ ಬಜಾರ್.. “ಮಂಡೆ” ಬಜಾರ್..: ಎಚ್. ಗೋಪಾಲಕೃಷ್ಣ ಸರಣಿ

ಮತ್ತೊಮ್ಮೆ ಆಗಲೇ ಅಪರೂಪ ಅನಿಸಿದ್ದ ಲೆಗ್ ಹಾರ್ಮೋನಿಯಂ ನೋಡಿದ್ದೆ. ಒಮ್ಮೆ ಅಲ್ಲೇ ಬುಲ್ ಬುಲ್ ತರಂಗ ಮಾರೋದನ್ನು ನೋಡಿ ಅದನ್ನ ಕೊಂಡು ತಂದೆ. ಅದನ್ನು ನುಡಿಸುವ ಬಗ್ಗೆ ಒಂದು ಕತ್ತೆ ಕಾಗದದಲ್ಲಿ ಪ್ರಿಂಟ್ ಮಾಡಿದ್ದ ಪುಸ್ತಕ ಬೇರೆ ಕೊಟ್ಟಿದ್ದ. ಅದನ್ನು ಸುಮಾರು ತಿಂಗಳು ನುಡಿಸಲು ಪ್ರಯತ್ನ ಪಟ್ಟೆ. ಹೇಗೆ ನುಡಿಸಿದರೂ ಒಂದೇ ಶಬ್ದ ಬರುತ್ತಿತ್ತು. ಸುಮಾರು ವರ್ಷ ಅಟ್ಟದ ಮೇಲೆ ಕೂತಿತ್ತು ಇದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ