Advertisement

Tag: ಕಾದಂಬರಿ

ಸುಪ್ರೀತ್ ಕೆ.ಎನ್. ಅವರ ‘ಉತ್ತರ’ ಕಾದಂಬರಿಯ ಪುಟಗಳು

ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು.
ಸುಪ್ರೀತ್ ಕೆ.ಎನ್. ಅವರ ಹೊಸ ಕಾದಂಬರಿ ‘ಉತ್ತರ’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಕಥಾವಿಸ್ತಾರ

ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ.

Read More

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ವಸುಧೇಂದ್ರರ ‘ತೇಜೋ=ತುಂಗಭದ್ರಾ’ ಕುರಿತು ಎಚ್.ಆರ್. ರಮೇಶ್ ಲೇಖನ

“ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು… “

Read More

ಮ್ಯೂಸಿಯಮ್ಮೂ, ಕಾದಂಬರಿಯೂ: ಪಾಮುಕ್ ಭಾಷಣ ಮಾಲಿಕೆ

”ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ. ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ