Advertisement

Tag: ಕೆಂಡಸಂಪಿಗೆ

ಚಿ ಛೀ ಚೀನಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ವೈಚಾರಿಕತೆಯ ಶುಷ್ಕತೆಯನ್ನು ದೂರವಿಡುವ ರೂಪಕಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು…”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚೆಕ್ ಗಣರಾಜ್ಯದ ಕವಿ ಮಿರೊಸ್ಲಾವ್ ಹೊಲುಪ್-ರವರ (Miroslav Holub, 1923-1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ

ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ “ಗಂಧ”

Read More

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ.
ಶ್ರುತಿ ಬಿ.ಆರ್.‌ ಕಥಾಸಂಕಲನ “ಎಲ್ಲೆಗಳ ದಾಟಿದವಳು” ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ ಇಲ್ಲಿದೆ

Read More

ಕಾವ್ಯಕುತೂಹಲ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ