ಇಂಗ್ಲೆಂಡಿನ ಕ್ರಿಕೆಟ್ ಲೋಕದ ಹುಮ್ಮಸ್ಸು
ಇಂಗ್ಲೆಂಡ್ ನಲ್ಲಿ ಪ್ರತಿ ಕ್ರಿಕೆಟ್ ಕ್ಲಬ್ಬಿಗೂ ಕ್ರಿಕೆಟ್ಟಿಗೆಂದೇ ಮೀಸಲಾದ ಮೈದಾನಗಳು ಇರುತ್ತವೆ. ಪ್ರತಿ ಕ್ಲಬ್ಬಿಗೂ ಸದಸ್ಯರಾಗಲು ವಾರ್ಷಿಕ ಚಂದಾ ಕೊಡಬೇಕು. ಒಂದು ಆಡಳಿತದ ತಂಡ ಇರುತ್ತದೆ. ಚಿಕ್ಕದಾದರೂ ಸರಿ, ಮೈದಾನಕ್ಕೆ ಅಂಟಿಕೊಂಡಂತೆ ಒಂದು ಕಟ್ಟಡವಿರುತ್ತದೆ, ಅದರೊಳಗೆ ಚಿಕ್ಕ ಪಬ್ಬು ಕೂಡ ಇರುತ್ತದೆ, ಮ್ಯಾಚು ನೋಡಲು ಬಂದವರು, ಮ್ಯಾಚು ಮುಗಿಸಿದ ಮೇಲೆ ತಿಂದು ಕುಡಿದು ಹೋಗಲು ಅಲ್ಲಿ ಅವಕಾಶವಿರುತ್ತದೆ. ಕ್ಲಬ್ಬಿನಲ್ಲಿ ಆಗಾಗ ಡಿನ್ನರ್ ಗಳನ್ನೂ ಬಾರ್ಬಿಕ್ಯೂಗಳನ್ನೂ ಇಟ್ಟುಕೊಂಡಿರುತ್ತಾರೆ ಮತ್ತು ಕ್ಲಬ್ಬಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಕೆಲವು ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳುತ್ತಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’