Advertisement

Tag: ಡಾ. ಎಂ. ವೆಂಕಟಸ್ವಾಮಿ

ಬ್ರಸೆಲ್ಸ್‌ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು.
ಯೂರೋಪ್‌ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ

Read More

ಸ್ವಿಟ್ಜರ್ಲೆಂಡ್ ಮತ್ತು ಜಗತ್ತಿನ ಕಪ್ಪು ಹಣ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಎರಡನೆಯ ಭಾಗ ಇಲ್ಲಿದೆ

Read More

ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಐಫೆಲ್‌ ಟವರ್‌ಗಿಂತ ತಿರುಪತಿಯೇ ವಾಸಿ!: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

1887 ಜನವರಿ, 28ರಂದು ಅಡಿಪಾಯ ಅಗೆಯಲು ಪ್ರಾರಂಭಿಸಿ 1889 ಮಾರ್ಚ್ 31ರಂದು ಗೋಪುರವನ್ನು ಕಟ್ಟಿ ಮುಗಿಸಲಾಯಿತು. ಇಪ್ಪತ್ತು ವರ್ಷಗಳಲ್ಲಿ ಗೋಪುರವನ್ನು ಕೆಡವಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಜನರು ಮೊದಲಿಗೆ ಗೋಪುರ ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ, ಪ್ಯಾರಿಸ್ ನಗರದ ಅಂದವನ್ನು ಕೆಡಿಸಿಬಿಟ್ಟಿದೆ ಎಂದು ದೂರಿದರು. ಆದರೆ ಅದು ಮುಂದಿನ ದಿನಗಳಲ್ಲಿ ಪ್ಯಾರಿಸ್‌ಗೆ ದೊಡ್ಡ ಆಸ್ತಿಯಾಗಿ ಮಾರ್ಪಟ್ಟಿತು. ಮುಂದಿನ ದಿನಗಳಲ್ಲಿ ಗೋಪುರದ ಮೇಲೆ ಸಂವಹನ, ಗುರುತ್ವಾಕರ್ಷಣೆ, ವಿದ್ಯುಚ್ಛಕ್ತಿ ಮತ್ತು ಪವನಶಾಸ್ತ್ರ ಪ್ರಯೋಗಾಲಯವನ್ನು ಅದರ ಮೇಲೆ ಸ್ಥಾಪನೆ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ