Advertisement

Tag: ಡಾ.ವಿನತೆ ಶರ್ಮಾ

ಸಾಂಘಿಕವಾದ ಕ್ರಿಸ್ಮಸ್ ಸೀಸನ್ ಶುಭಾಶಯಗಳು

ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಚುರುಮುರಿ, ಕೋಸಂಬರಿಯಾದ ‘ಆಸ್ಟ್ರೇಲಿಯಾ ಪತ್ರ’

ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ರೇನ್ಬೋ ಬೀಚ್: ರಾಣಿರಾಜ್ಯದ ಕಾಮನಬಿಲ್ಲು

ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ವಸತಿ ಸಮಸ್ಯೆ, ರಾಜಕೀಯ ಪ್ರಶ್ನೆಗಳ ಕಥೆಗಳು

ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯಾದ ಹೊಸ ರಾಜ, ಹೊಸ ಭವಿಷ್ಯದ ಕನಸುಗಳು

ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ