Advertisement

Tag: ಡಾ.ವಿನತೆ ಶರ್ಮಾ

ಬಿಸಿಲ ಧಗೆ, ಚಳಿಯ ಹೊರೆಗಳ ನಡುವೆ ಅರಳುವ ಡಾಫೋಡಿಲ್ ಎಲ್ಲಿದೆ..

ಆಸ್ಟ್ರೇಲಿಯದ  ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದೂ ಮುಖ್ಯವಾಗಿತ್ತು.
ಡಾ. ವಿನತೆ ಶರ್ಮಾ ಅಂಕಣ

Read More

ಗೆಟ್ ಅಪ್, ಸ್ಟಾಂಡ್ ಅಪ್, ಶೋ ಅಪ್….

ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ.
ಡಾ. ವಿನತೆ ಶರ್ಮಾ ಅಂಕಣ

Read More

ದೂರದೂರಿನ ನೆಂಟತನವೂ, ನೆರೆಹೊರೆಯವರ ಸ್ನೇಹಹಸ್ತವೂ

ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಇಂಗ್ಲಿಷ್ ಭಾಷೆಯ ಜೊತೆ ಆಮದಾಗಿ ಬಂದಿದ್ದು ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶ. ಈ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ನಗರ-ಬೆಟ್ಟಗಳ ಕಿರು ಕತೆಗಳು

ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ

ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ