Advertisement

Tag: ಡಾ.ವಿನತೆ ಶರ್ಮ

ಬೆಳಕು ಬಣ್ಣದ ಭ್ರಮಾಲೋಕ ​ರಿವರ್ ಫೈರ್

ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್‌ ನಡೆಯುವ  ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ.  ಬ್ರಿಸ್ಬೇನ್‌ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ  ಸಡಗರದ ಸುದ್ದಿಯನ್ನು ಬರೆದಿದ್ದಾರೆ. 

Read More

ಆಸ್ಟ್ರೇಲಿಯಾದ ಪ್ರವಾಸಿಗರ ಕನಸು-ಕನವರಿಕೆಗಳು

 ಪ್ರವಾಸಿಗರಿಗೆ, ಕ್ಯಾಂಪಿಗರಿಗೆ, ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಓಮಿಕ್ರೋನ್ ಜೊತೆ ಹೊಸವರ್ಷ ಆರಂಭದ ಪಲುಕು

ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ…

Read More

ಮಳೆ, ಬೇಸಗೆ, ಕ್ರಿಕೆಟ್ ಇತ್ಯಾದಿ ಬಿಸಿ-ತಂಪು ಕಥೆಗಳು

ಬೇಸಗೆಯ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ದೇಶದ ಪೂರ್ವ ಮತ್ತು ಉತ್ತರ ದಿಕ್ಕುಗಳ ಪೂರ್ತಿ ‘ಲ ನಿನಾ’ ಎಂಬ ಮಳೆ-ಮಾರುತ ಹವಾಮಾನ ವಿಜೃಂಭಿಸಲಿದೆ. ಬಿಸಿಲಿನ ಜೊತೆ ಒಂದಷ್ಟು ತಂಪು, ಅಗಾಧ ಮಳೆ ಮತ್ತು ಚಂಡಮಾರುತವು ಜನಜೀವನದಲ್ಲಿ ಆಟವಾಡಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಅದರ ಮುನ್ಸೂಚನೆಯೆಂಬಂತೆ ಈಗಾಗಲೇ ನ್ಯೂ ಸೌತ್ ವೇಲ್ಸ್ ಮತ್ತು ನಮ್ಮ ರಾಣಿರಾಜ್ಯದ ಕೆಲ ಭಾಗಗಳಲ್ಲಿ ಬೇಕಾದಷ್ಟು ಮಳೆಯಾಗಿದೆ.- ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಸೇನಾಪಡೆ ನಿವೃತ್ತಿ ಜೀವನದ ಕಥೆಗಳು

ಸೇನೆಯು ಸೈನಿಕರ ದಿನನಿತ್ಯ ಜೀವನದ ಆಗುಹೋಗುಗಳ ಮೇಲೆ ಹದ್ದಿನಂತೆ ಕಣ್ಣಿಟ್ಟಿರುತ್ತದೆ, ಅವರು ಎಲ್ಲೇ ಹೋಗಲಿ ಬರಲಿ, ಯಾರನ್ನೇ ಭೇಟಿಯಾಗಲಿ, ಎಲ್ಲವೂ ದಾಖಲಾಗುತ್ತದೆ. ರಜೆ ಪಡೆದು ಮನೆಗೆ ಹೋದರು ಕೂಡ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮತ್ತೊಬ್ಬರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಸದಾಕಾಲ ಕಾಲಿನ ಬೆರಳುಗಳ ಮೇಲೆ ನಿಂತಿರುವುದು ಮಾನಸಿಕ ಕ್ಷೋಭೆಗೆ ದಾರಿ ಮಾಡಿಕೊಡುತ್ತದೆ. ಖಾಸಗಿತನವೇ ಇಲ್ಲದೆ ಜೀವನ ಮಾಡುವ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ