Advertisement

Tag: ಡಾ.ವಿನತೆ ಶರ್ಮ

ಶರತ್ಕಾಲದ ತಂಪೂ, ಸಾಮರಸ್ಯದ ವಾರವೂ: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರುವಾಗಿದೆ. ದಿನದ ಉಷ್ಣಾಂಶ ತಗ್ಗುತ್ತಿದೆ. ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಬೇಸಿಗೆಯ ತೀವ್ರತೆಯಿಂದ ಬಳಲಿದ್ದ ಮೈಮನಗಳಿಗೆ ಈ ತಂಪು ಹಿತವಾಗಿದ್ದು, ಬೆಚ್ಚನೆ ಹೊದಿಕೆಯಲ್ಲಿ ಮೈ ತೂರಿಸಿ ಸುಖವಾಗಿ ನಿದ್ರಿಸುವ ಈ ದಿನಗಳು ಅಪ್ಯಾಯಮಾನವಾಗಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ಮಹಿಳಾ ಚೈತನ್ಯ, ಆರ್ಥಿಕ ರಂಗದಲ್ಲಿ ಒಳಗೊಳ್ಳುವಿಕೆ… : ವಿನತೆ ಶರ್ಮ ಅಂಕಣ

ಅವಳು ‘ಕೇರ್ ಗಿವರ್’ ಸ್ಥಾನದಲ್ಲಿದ್ದಾಗ ಕುಟುಂಬದ ಇತರರು ಗಂಡಸು ಕುಟುಂಬದ ಹಿರಿಯ/ಮುಖ್ಯಸ್ಥ ಎನ್ನುವ ನಂಬಿಕೆಯನ್ನು ಮುಂದುವರೆಸುತ್ತಾರೆ. ಮುಂದೊಮ್ಮೆ ಅವಳು ಉದ್ಯೋಗಕ್ಕೆ ವಾಪಸ್ಸಾಗಿ ತಿಂಗಳ ಸಂಬಳ ಪಡೆದರೂ ಅಷ್ಟರಲ್ಲಿ ಮನೆ ಸಾಲ ತೀರಿಸುವುದು ಗಂಡಸು, ತಿಂಗಳ ಖರ್ಚಿಗೆ ದುಡಿಯುವುದು ಗಂಡಸು ಎನ್ನುವುದು ಆಳವಾಗಿ ಬೇರೂರಿರುತ್ತದೆ. ಕಡೆಗೆ ಹೆಂಗಸಿನ ಗಳಿಕೆ ‘ಸೆಕೆಂಡರಿ’ ಆಗಿಯೇ ಉಳಿಯುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಹಿಳಾ ಸಾಮರ್ಥ್ಯ ಮತ್ತು ಸಬಲೀಕರಣ…: ವಿನತೆ ಶರ್ಮ ಅಂಕಣ

ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಬಹುಸಂಸ್ಕೃತಿಗಳ ಆಸ್ಟ್ರೇಲಿಯಾದಲ್ಲಿ ನೆರೆಹೊರೆ: ವಿನತೆ ಶರ್ಮ ಅಂಕಣ

ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಿಶ್ರಭಾವಗಳ ಮೂರ್ತರೂಪ ‘ಆಸ್ಟ್ರೇಲಿಯಾ ಡೇʼ : ವಿನತೆ ಶರ್ಮ ಅಂಕಣ

ಮೂಲನಿವಾಸಿ ಜನಸಮುದಾಯಗಳ ಬೆಂಬಿಡದ ಪ್ರಯತ್ನಗಳಿಂದ ಅವರ ಸಂಸ್ಕೃತಿಗಳು, ಭಾಷೆಗಳ ಬಗ್ಗೆ ಗೌರವ ಹೆಚ್ಚುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿಗಳ ಪ್ರಭಾವ, ವಲಸಿಗರ ಸಂಖ್ಯೆ ಜನರ ಮನೋಭಾವನೆಯನ್ನು ಬದಲಿಸುತ್ತಿದೆಯೇನೋ. ಇವರುಗಳ ಬಹುಸಂಸ್ಕೃತಿ ಆಚಾರ-ವಿಚಾರಗಳ, ಆಹಾರಪದ್ಧತಿಗಳ ವೈವಿಧ್ಯತೆಗಳಿಂದ, ಸಾಮ್ಯತೆಗಳಿಂದ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿಸ್ತರಿಸುತ್ತಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ