Advertisement

Tag: ಬಸವನಗೌಡ ಹೆಬ್ಬಳಗೆರೆ

ಪಿಯುಸಿಯ ಕಡುಕಷ್ಟದ ಆ ದಿನಗಳು….: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಮಕ್ಕಳನ್ನು ಮಕ್ಕಳಂತಿರಲು ಬಿಡಿ ಪಾಪ!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಶಾಲೆ ಬಿಡಿಸಿದ ಲವ್ ಲೆಟರ್…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ‌ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ನಾವೆಂದೂ ಮರೆಯಲಾಗದ ಹಾಸ್ಟೆಲ್ ಕಲಿಸಿದ ಪಾಠ…: ಬಸವನಗೌಡ ಹೆಬ್ಬಳಗೆರೆ ಸರಣಿ

ಶನಿವಾರ ಶಾಲೆ ಬಿಟ್ಟಾಗಿನಿಂದ ಹಿಡಿದು ಸಂಜೆ 5;30 ವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳದೆ ಕ್ಲೀನ್ ಮಾಡಿದರೆ ಮಾತ್ರ ಎಲ್ಲಾ ತೊಟ್ಟಿಗಳು ಕ್ಲೀನ್ ಮಾಡೋಕೆ ಸಾಧ್ಯ ಆಗ್ತಾ ಇತ್ತು. ಆ ನಂತರ ಸ್ನಾನ ಮಾಡಿ ನಮಗೆ ಸಿಕ್ಕ ಮೆಸ್ಸಿನಲ್ಲಿ ರಾತ್ರಿ ಊಟ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ತಾ ಇದ್ವಿ!! ‘ಭೂತಯ್ಯನ ಮಗ ಅಯ್ಯ’ ಫಿಲಮ್ಮಿನಲ್ಲಿ ಬರೋ ಸೀನಿನ ತರಹ ಕೆಲವರು ಸಾಕಷ್ಟು ಬಡಿಸಿಕೊಂಡು ತಿನ್ತಾ ಇದ್ರು. ನಮಗೆ ತುಂಬಾ ಖುಷಿ ಆಗ್ತಾ ಇತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಇಂಗ್ಲೀಸ್ನ್ಯಾಗೆ ಹೆಸರು ಬರೆಯಲು ಕಲಿತ ಮಂಜಣ್ಣ!: ಬಸವನಗೌಡ ಹೆಬ್ಬಳಗೆರೆ ಸರಣಿ

ಹೆಸರು ಕಲಿತ ಮಂಜಣ್ಣ ಸಂಬಳವಿದ್ದ ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ ಹಾಕಿ ಎಣ್ಣೆ ಅಂಗಡಿಗೆ ಹೋಗಿ, ಹೆಸರು ಕಲಿತ ಖುಷಿಗೆ ತುಸು ಹೆಚ್ಚೇ ಕುಡಿದಿದ್ದಾನೆ. ಮನೆ ಓಣಿಯಾಗೆಲ್ಲಾ ತೂರಾಡುತ್ತಾ ‘ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ ಬರುತ್ತೆ’ ಎಂದು ಕೂಗಾಡುತ್ತಾ ಹೋಗಿದ್ದಾನೆ. ಮನೆಗೆ ಹೋಗಿ ಮಣ್ಣ ನೆಲದ ಮೇಲೆ ಕಲ್ಲಲ್ಲಿ ಮನೆ ತುಂಬಾ ಕೆತ್ತಿದ್ದಾನೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ