Advertisement

Tag: ರಂಜಾನ್ ದರ್ಗಾ

ಓ ದೇವರೆ ಈ ಪುಣ್ಯ ಅವನಿಗೆ ಲಭಿಸಲಿ

ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು. ತಂದೆ ಆ ಎರಡು ರೂಪಾಯಿ ಚಿಲ್ಲರೆ ದುಡ್ಡನ್ನು ಕುಂಬಳ ಚಾಟಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು ಇಲ್ಲಿದೆ.

Read More

ನನ್ನ ತಂದೆ ಶರಣರಂತೆ, ಸಂತರಂತೆ

ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು.  ವಾಪಸ್ ಮಾಡುವ ಶಕ್ತಿಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ನೀತಿಯಾಗಿತ್ತು. ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆ ಆಚರಿಸುತ್ತಿದ್ದರೂ  ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ರಂಜಾನ್‌ ದರ್ಗಾ ಬರೆಯುವ  ನೆನಪಾದಾಗಲೆಲ್ಲ ಸರಣಿ

Read More

ಅರುವತ್ತು ವರ್ಷಗಳ ರಾಜಕೀಯ ಅರಿವು

ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು.

Read More

ರಾವಸಾಹೇಬ್ ಆದ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಲಕ್ಷ್ಮೇಶ್ವರ

ಅಪರಾಧಿ ಬುಡಕಟ್ಟು ಎಂದು ಅಪಮಾನಕ್ಕೀಡಾದ ಯುವಕರಿಗೆ ಸಂಸ್ಕಾರ ನೀಡಿ ಸಭ್ಯ ಗೃಹಸ್ಥರನ್ನಾಗಿ ಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಅಪರಿಮಿತವಾದ ತಾಳ್ಮೆ ಬೇಕು. ‘ಅವರಲ್ಲೂ ಮನುಷ್ಯತ್ವ ಇದೆ’ ಎಂಬ ಅಚಲವಾದ ನಂಬಿಕೆ ಬೇಕು. ದೈನಂದಿನ ಬದುಕಿನ ಎಲ್ಲ ಹಂತಗಳಲ್ಲಿ ಅವರನ್ನು ನಿರೀಕ್ಷಿಸುವ ಮೂಲಕ ಅವರನ್ನು ತಿದ್ದುವುದು. ಅವರಲ್ಲಿ ಹೊಸ ಕನಸುಗಳ ಸೃಷ್ಟಿ ಮಾಡುವುದು. ತಮಗೂ ಬೇರೆಯರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸುವುದು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿಯ 39ನೆಯ ಕಂತು .

Read More

ಬ್ರಿಟಿಷ್ ಹ್ಯಾಟ್ ಮತ್ತು ಗಾಂಧಿಟೋಪಿ

ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು. ನಾನು ಒಂದನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದಾಗಲೇ ಮನುಷ್ಯರು ಹೇಗೆ ಇರಬೇಕು ಎಂಬುದರ ಪಾಠವನ್ನು ಅವರನ್ನು ನೋಡುವುದರ ಮೂಲಕ ಕಲಿತೆ. ಇಂದಿಗೂ ಆ ಪಾಠವೇ ನನ್ನ ಬದುಕನ್ನು ರೂಪಿಸುತ್ತಿದೆ. ಹೀಗಾಗಿ ಅವರ ನೆನಪು ನನ್ನಲ್ಲಿ ಸದಾ ಹಸಿರಾಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 38ನೆಯ ಕಂತು ಇಲ್ಲಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ