ಪೋಲಿಸ್ ಕಿ ಬೇಟಿ…
ನಾನು ಎಲ್ಲರ ಮುಖವನ್ನು ಒಂದೊಂದಾಗಿ ನೋಡುತ್ತ ಹೋದೆ. ಎಲ್ಲ ಹೆಂಗಸರೂ ಚೆನ್ನಾಗಿ ತಲೆ ಬಾಚಿ ಕೊಂಡಿದ್ದಾರೆ. ಮುಖಕ್ಕೆ ಪೌಡರು, ಕಣ್ಣಿಗೆ ಸುಖ ಕೊಡುವ ಸೀರೆಗಳು, ಒಂದಿಷ್ಟು ಅಮ್ಮಿ ಕಾಣುವಂಥ ಬ್ಲೌಜುಗಳು, ಕೈತುಂಬ ರಂಗುರಂಗಿನ ಬಳೆಗಳು, ಬಾಯಿತುಂಬ ಎಲೆ ಅಡಿಕೆ. ಜನ ‘ಗಳಸವರುʼ ಎಂದು ಕರೆಯುವುದು ಇವರಿಗೇನೆ ಇರಬಹುದು ಎಂಬ ಗುಮಾನಿ ಶುರುವಾಯಿತು. ಅದೇನೇ ಇದ್ದರೂ ಅವರು ಅಷ್ಟೊಂದು ಸುಖವಾಗಿ ಇದ್ದದ್ದು ನನಗೆ ಹೊಸ ಅನುಭವವನ್ನು ಕೊಡುತ್ತಲಿತ್ತು.
ಹಾಡುಗಳು ಶುರುವಾದವು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿ