‘ಭಕ್ತರಿಗೆ ಭಾಗ್ಯ ಕೊಡು. ಮಕ್ಕಳಿಗೆ ಬಡತನ ಕೊಡು’
ಒಬ್ಬ ವ್ಯಕ್ತಿ ಹೀಗೆ ದೇವನಾಗಲು ಹೇಗೆ ಸಾಧ್ಯ ಎಂದು ವಿಚಾರವಾದಿಗಳಿಗೆ ಅನಿಸದೆ ಇರದು. ಜನಸಮುದಾಯಗಳ ಬಗ್ಗೆ ಅತೀವ ಕಾಳಜಿಯುಳ್ಳ ಸಾಮಾಜಿಕ ಮನುಷ್ಯ ಜನಪದರ ಕಣ್ಣಲ್ಲಿ ದೇವರಾಗಿ ಕಾಣುತ್ತಾನೆ. ತಮ್ಮ ಮೇಲೆ ನಿಷ್ಕಾಮ ಪ್ರೀತಿಯ ಮಳೆಗೆರೆಯುವವನನ್ನು ಜನಸಾಮಾನ್ಯರು ಹೀಗೆ ದೇವರಾಗಿಸುತ್ತಾರೆ. ಅಮೋಘಸಿದ್ಧನಂಥ ಅಖಂಡ ಪ್ರೀತಿಯೇ ದೈವೀ ಗುಣ. ಅಂಥ ಗುಣವುಳ್ಳವರೇ ದೇವರು. ಅದ್ದರಿಂದ ಇಂಥ ಸಿದ್ಧರ ಕುರಿತ ಡೊಳ್ಳಿನ ಪದಗಳೆಲ್ಲ “ನಮ್ಮಯ ದೇವರು ಬಂದಾರ ಬನ್ನಿರೇ” ಎಂದೇ ಪ್ರಾರಂಭವಾಗುತ್ತವೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ