ಏನೋ ಲೆಕ್ಕಹಾಕಿ ಶಾಲೆಗೆ ಹೆಸರು ಹಚ್ಚಿದ ಮಾಸ್ತರರು
ಅದಾವುದೊ ಸ್ಥಾನಕ್ಕೆ ಆಯ್ಕೆಯಾದ ಗಣ್ಯವ್ಯಕ್ತಿಯೊಬ್ಬರಿಗೆ ಸನ್ಮಾನಿಸುವ ಮತ್ತು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುವ ಕಾರ್ಯಕ್ರಮವೊಂದು ನಡೆಯಿತು. ಸ್ವಲ್ಪ ಸಮಯದ ನಂತರ ಬಂದ ಆ ಗಣ್ಯವ್ಯಕ್ತಿ ಶರಣಯ್ಯ ವಸ್ತ್ರದ ಎಂಬುದು ತಿಳಿಯಿತು. ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು.”
Read More