Advertisement

Tag: ರಂಜಾನ್ ದರ್ಗಾ

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ನೆರೆಮನೆಯ ದುಃಖ: ರಂಜಾನ್‌ ದರ್ಗಾ ಸರಣಿ

ಹೇಗ್‌ನಲ್ಲಿ ಸಿಕ್ಕ ಪಾಕಿಸ್ತಾನದ ಆ ಧೈರ್ಯ ತುಂಬಿದ ಮಹಿಳೆಯರ ಬಗ್ಗೆ ಪಕ್ಕದಲ್ಲಿ ಕುಳಿತಿದ್ದ ಈ ಮಹಿಳೆಗೆ ಹೇಳಿದೆ. ‘ಈಗ ನೀವು ಹೇಳುತ್ತಿರುವುದು ತದ್ವಿರುದ್ಧವಾಗಿದೆಯಲ್ಲಾ’ ಎಂದು ತಿಳಿಸಿದೆ. ಆಗ ಆ ಮಹಿಳೆ ಹೇಳಿದಳು: ‘ಅದೆಲ್ಲಾ ಆ ಕಾಲದ ಮಾತು. ಈಗ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಉಗ್ರರು ಪಾಕಿಸ್ತಾನವನ್ನು ಅಳಿವಿನ ಅಂಚಿಗೆ ತಂದಿಡುತ್ತಿದ್ದಾರೆ. ನಿಮ್ಮ ದೇಶ ಎಷ್ಟೋ ಪಾಲು ಮೇಲು. ನಿಮ್ಮ ಸಿನಿಮಾಗಳು, ನಿಮ್ಮ ಸಂಗೀತ, ನಿಮ್ಮ ವಸ್ತುಗಳು ನಮಗೆ ಬಹಳ ಪ್ರಿಯವಾಗಿವೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕಾಶ್ಮೀರ ಪ್ರವಾಸದ ನೆನಪುಗಳು…: ರಂಜಾನ್‌ ದರ್ಗಾ ಸರಣಿ

ಸೋನ್‌ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ನನ್ನ ತಾಯಿ ವೆಂಕೂಬಾಯಿ: ರಂಜಾನ್‌ ದರ್ಗಾ ಸರಣಿ

ವೆಂಕೂಬಾಯಿ ನನ್ನ ಪಾಲಿನ ಮಹಾತಾಯಿ ಆಗಿದ್ದರು. ನಾನು ಅವರ ಮಗನೇ ಎನ್ನುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. ನನಗಾಗಿ ಅವರು ಬ್ರಾಹ್ಮಣ ಸಂಪ್ರದಾಯದ ಎಲ್ಲ ಕಟ್ಟಳೆಗಳನ್ನು ಮೀರುತ್ತಿದ್ದರು. ಖುಷಿಯ ವಿಚಾರವೆಂದರೆ “ನಾನು ಮೀರುತ್ತಿದ್ದೇನೆ” ಎಂಬ ಭಾವವೂ ಅವರಲ್ಲಿ ಇರಲಿಲ್ಲ. ನಾನು ಬಿಸಿಬಿಸಿ ರೊಟ್ಟಿ ಪ್ರಿಯ. ಊಟದ ಸಮಯಕ್ಕೆ ಹೋದಾಗಲೆಲ್ಲ ನನಗಾಗಿ ರೊಟ್ಟಿ ಬಡಿಯುತ್ತಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 76ನೇ ಕಂತು ನಿಮ್ಮ ಓದಿಗೆ

Read More

ಸ್ವೋಪಜ್ಞ ಮನಸ್ಸಿನ ಉದಾತ್ತ ಮಾನವ: ರಂಜಾನ್ ದರ್ಗಾ ಸರಣಿ

ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 75ನೇ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ