Advertisement

Tag: ರಂಜಾನ್ ದರ್ಗಾ

ನಾಲ್ಕಾಣೆಯಿಂದ ಒಂದು ಪ್ರಾಣ ಉಳಿಯಿತು!

ಆಕೆ ಅಗಸಿಯ ಕಡೆಗೆ ಹೋಗುತ್ತಿರುವುದರಿಂದ ಏನಾಗಿದೆ ಎಂದು ಕೇಳಿಯೆಬಿಟ್ಟೆ. ಅಡುಗೆಯಲ್ಲಿ ಉಪ್ಪಿಲ್ಲವೆಂದು ಗಂಡ ಹೊಡೆದಿರುವುದಾಗಿ ತಿಳಿಸಿದಳು. ‘ಆತ ಹಣ ಕೊಡದಿದ್ದರೆ ಉಪ್ಪು ಎಲ್ಲಿಂದ ತರಲಿ’ ಎಂದು ಕೇಳಿದಳು. ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬಾವಿಗೆ ಹಾರುವುದಾಗಿ ಹೊರಟೇಬಿಟ್ಟಳು. ಮತ್ತೆ ತಡೆದೆ. ಬಿಗಿ ಮುಷ್ಟಿಯಲ್ಲಿದ್ದ ನಾಲ್ಕಾಣೆಯನ್ನು ತೋರಿಸುತ್ತ ‘ಇದನ್ನು ಕೊಟ್ಟರೆ ವಾಪಸ್ ಹೋಗುವೆಯಾ’ ಎಂದು ಕೇಳಿದೆ. ಆಕೆ ಕೃತಜ್ಞತೆಯಿಂದ ತೆಗೆದುಕೊಂಡು ಮನೆಯ ದಾರಿ ಹಿಡಿದಳು. ಆ ನಾಲ್ಕಾಣೆಯನ್ನು ಖರ್ಚು ಮಾಡಿದೆನೆಂದು ಭಾವಿಸಿ ತಾಯಿ ಬಡಿದದ್ದು ನೋವೆನಿಸಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 58ನೇ ಕಂತು ನಿಮ್ಮ ಓದಿಗೆ.

Read More

ಜಾತಿ-ಧರ್ಮಗಳ ನಡುವೆ ಭೇದವಿಲ್ಲದ ಕಾಲದಲ್ಲಿ….

ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆಯ ಸರಣಿ

Read More

ಮೆಳ್ಳಿಗೇರಿ ಸರ್‌ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!

ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

‘ಕಾಲೇ ಕೋ ಜಿಂದಗಿ ನಹಿ’

ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

900 ದಿನ ಫ್ಯಾಸಿಸ್ಟರ ಮುತ್ತಿಗೆಯಲ್ಲಿ ನಲುಗಿದ ಲೆನಿನ್‌ಗ್ರಾಡ್

ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸ್ಟರು 90 ಲಕ್ಷ ರಷ್ಯನ್ನರನ್ನು ಯಾತನಾಶಿಬಿರಗಳಲ್ಲಿ ಕೊಂದಿದ್ದಾರೆ. ಜನರನ್ನು ಕೊಲ್ಲಲು ಅವರು ಗ್ಯಾಸ್ ಚೇಂಬರ್‌ಗಳನ್ನು ಬಳಸಿದರು. ಮೃತದೇಹಗಳ ಕೊಬ್ಬನ್ನು ಸಾಬೂನು ಮತ್ತು ಹದಗೊಳಿಸಿದ ತೊಗಲು ತಯಾರಿಸಲು ಉಪಯೋಗಿಸಲಾಯಿತು. ಕೂದಲಿನಿಂದ ಹಾಸಿಗೆ ಮತ್ತು ಕಾಲ್ಚೀಲಗಳು ತಯಾರಾದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ