ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ
ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ