ಸೊಂಟಕ್ಕೆ ಕೆಂಪು ದುಪಟ್ಟಾ ಕಟ್ಟಿಕೊಂಡ ಹುಡುಗಿ
ಅದ್ಯಾವ ಗಳಿಗೆಯಲ್ಲಿ ನಮ್ಮೂರಿನ ಮಂದಿಯ ತಲೆಯೊಳಗೆ ‘ಟೈಟಾನಿಕ್’ ಹುಳು ಬಿಟ್ಟಿದ್ದರೋ ಕಾಣೆ. “ಹಡಗು ಮುಳುಗೋ ಸಿನ್ಮಾ ನೋಡೋಕೆ ಹೋಗ್ತಿದ್ದೀವಿ,” ಅಂತ ಹಲ್ಕಿರಿಯುತ್ತ, ಕೂಲಿಯನ್ನೂ ಬಿಟ್ಟು ಬಸ್ಸು ಹತ್ತಿದ್ದ ನಮ್ಮೂರ ಮಂದಿಯ ಹುರುಪು ನೆನೆದರೆ ಹೆಮ್ಮೆ, ಪ್ರೀತಿ. ಆ ಸಿನಿಮಾ ತರೀಕೆರೆಯ ಟಾಕೀಸಿನಲ್ಲಿ ಇದ್ದ ಅಷ್ಟೂ ದಿನ ಊರಿನ ಒಂದಲ್ಲ ಒಂದು ತಲೆ ಮಾರ್ನಿಂಗ್ ಶೋ ಕಂಡದ್ದಿದೆ.
ಸೊಗದೆ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಬರಹ.