Advertisement

Tag: ಸಾಹಿತ್ಯ

ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್‌ಷಾಪಿಗೆ ರಿಸೋರ್ಸ್‌ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್‌ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ” ನಿಮ್ಮ ಓದಿಗೆ

Read More

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

Read More

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ

ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣ

Read More

ಕೇರಿಯ ಕುಟುಂಬವೊಂದರ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಮೈಮನಗಳ ತಾಕಲಾಟದಲ್ಲಿ ಮೂಡಿದ ಜೀವನ ಶೋಧ: ಸುಧಾಕರ ದೇವಾಡಿಗ ಬಿ ಬರಹ

ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್‌ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ.
ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ “ಮಂಪರು” ಕುರಿತು ಸುಧಾಕರ ದೇವಾಡಿಗ ಬಿ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ