ʻಲೋಕ ಸಿನಿಮಾ ಟಾಕೀಸ್ʼ ನಲ್ಲಿ ಜಪಾನ್ ನ ʻಸ್ಟಿಲ್ ವಾಕಿಂಗ್ʼ ಸಿನಿಮಾ
“ಕಾದಂಬರಿಕಾರನಾಗಬೇಕೆಂದು ಬಯಸಿದ್ದ ಹಿರೊಕುಜು಼ ಕೊರೀಡ ಚಿತ್ರರಂಗಕ್ಕೆ ಪ್ರವೇಶಿಸಿದ್ದು ದೃಶ್ಯ ಮಾಧ್ಯಮದ ಪರಿಕರಗಳನ್ನು ಕುರಿತು ಅವನಿಗಿದ್ದ ಭರವಸೆಯ ಬಲದಿಂದ. ಅವನು ಚಿತ್ರದ ನಿರೂಪಣೆಯಲ್ಲಿ ಓಜು಼ನಿಂದ ಪ್ರಭಾವಿತನಾಗಿದ್ದಾನೆ ಎಂದು ಅವನು ಚಿತ್ರಗಳಿಗೆ ಆರಿಸಿಕೊಂಡಿರುವ ವಸ್ತುಗಳು ಮತ್ತು ಅವನ ನಿರೂಪಣಾ ವಿಧಾನದಿಂದ ತಿಳಿಯಬಹುದು. ಅವನ ಚಿತ್ರಗಳು ಸಾಮಾನ್ಯವಾಗಿ ಮಧ್ಯಮ ವರ್ಗದ ಸಾಂಸಾರಿಕ ವಸ್ತುವನ್ನು ಹೊಂದಿರುತ್ತದೆ.”
Read More