Advertisement

Tag: Kannada Story

ನವೀನ ಗಣಪತಿ ಬರೆದ ಈ ಭಾನುವಾರದ ಕತೆ

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ ಕತೆ

ಅವತ್ತೆ ಹುಚ್ಚರಾಮ ನಿಶ್ಚಯಿಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬಿಡಬೇಕು. ನಾಳೆಯೇ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಲಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ. 
 ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ “ಸಕಲರೋಳು ಲಿಂಗಾತ್ಮಾ ಕಾಣಾ” ಕಥೆ ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ

ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಬರೆದ ಕಥೆ

“ಸರ್ಕಾರಿ ಕೆಲಸ ಬಿಟ್ಟು ಮಗ ತನಗೆ ನಿರಾಸೆ ಮಾಡಿದಾಂತ ಕೊರಗಿ ನನ್ನಪ್ಪ ಸತ್ತನೋ ಅಥವಾ ಎಂದೋ ತೀರಿಕೊಂಡ ಹೆಂಡತಿಯ ನೆನಪು ಕಾಡಿದ್ದು ಹೆಚ್ಚಾಗಿ ಸತ್ತನೋ ಅಥವಾ ಕುಡಿತದ ದಾಸನಾಗಿ ಸತ್ತನೋ ನನಗರ್ಥ ಆಗಲಿಲ್ಲ. ಆದರೂ ಲೋಕಜ್ಞಾನ ಇರೋ ಮಗನ ನಿರ್ಧಾರ ಇಳಿವಯಸ್ಸಿನ ತಂದೇನ ಇಷ್ಟೆಲ್ಲ ಕಂಗೆಡಿಸಲಿಕ್ಕೆ ಸಾಧ್ಯಾನಾ? ಇದಂತೂ ನನಗೆ ಬಗೆಹರೀಲೇ ಇಲ್ಲ….”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ