ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ
ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ