ಬದುಕಲು ಕಲಿತೆವು: ರಂಜಾನ್ ದರ್ಗಾ ಸರಣಿ
ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ