Advertisement

Tag: Ramjan Darga

ಓ ದೇವರೆ ಈ ಪುಣ್ಯ ಅವನಿಗೆ ಲಭಿಸಲಿ

ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು. ತಂದೆ ಆ ಎರಡು ರೂಪಾಯಿ ಚಿಲ್ಲರೆ ದುಡ್ಡನ್ನು ಕುಂಬಳ ಚಾಟಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು ಇಲ್ಲಿದೆ.

Read More

ಅವರ ಬದುಕು ಅರ್ಥವಾಗದೆ ನಮ್ಮ ಬದುಕು ವ್ಯರ್ಥ

ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ

Read More

ಎ ಪ್ಯಾಸೇಜ್ ಟು ನಾವಿಗಲ್ಲಿ…

ನಮ್ಮ ಕೆಲ ಜನ ಎಷ್ಟೊಂದು ವಿಚಿತ್ರವಾಗಿರುತ್ತಾರೆ ಎನ್ನುವುದಕ್ಕೆ ಗೌಸ್ ಮತ್ತು ಖೈರುನ್ನೀಸಾಳ ನಿಶ್ಚಿತಾರ್ಥವೇ ಸಾಕ್ಷಿ. ತನ್ನ ಮಗಳನ್ನು ತಮ್ಮನಿಗೆ ಕೊಡಬೇಕೆಂದು ಗೌಸ್ ಅಕ್ಕ ನಿರ್ಧರಿಸಿದಳು. ಆತನೋ ಗಂಡನಾಗುವ ಸಾಧ್ಯತೆ ಇಲ್ಲದವನು. ಆತನ ನಡಿಗೆ, ಮಾತು ಮುಂತಾದವು ಹೆಂಗಸರ ಹಾಗೇ ಇದ್ದವು. ಅವನ ಸಹವಾಸವೂ ಹೆಣ್ಣುಮಕ್ಕಳ ಜೊತೆಗೇ ಇತ್ತು. ಕಂಡ ಕಂಡವರ ಮನೆಯಲ್ಲಿ ಕಲಬತ್ತಿನಲ್ಲಿ ಚಟ್ನಿ ಕುಟ್ಟೋದು ಮತ್ತು ಮಸಾಲೆ ಅರಿದು ಕೊಡೋದು ಎಂದರೆ ಆತನಿಗೆ…

Read More

‘ಠೂ..’ ಬಿಟ್ಟ ಗೆಳೆಯರನ್ನು ಒಂದಾಗಿಸಿಬಿಡುತ್ತಿದ್ದ ಹಬ್ಬಗಳು

ನಾಗರಪಂಚಮಿಯಲ್ಲಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡುವ ಜೋಷ್ ಬಗ್ಗೆ ಬರೆಯಲು ಶಬ್ದಗಳು ಸಾಲುತ್ತಿಲ್ಲ. ಒಂದು ಜೋಕಾಲಿಯಲ್ಲಿ ಇಬ್ಬರು ಮಹಿಳೆಯರು ಎದುರು ಬದುರಾಗಿ ಜೋಕಾಲಿ ಜೀಕುವಾಗ ಶಕ್ತಿಯ ಜೊತೆಗೇ ಅವರ ಸ್ವಾತಂತ್ರ್ಯದ ಸುಖ ಎದ್ದು ಕಾಣುತ್ತಿತ್ತು. ಹುತ್ತಕ್ಕೆ ಹಾಲೆರೆಯುವ ಮೂಢನಂಬಿಕೆ ಜೊತೆಗೇ ಅದನ್ನು ಮೀರಿ ನಮ್ಮ ಜನರ ಆಶಯಗಳ ಬಗ್ಗೆಯೂ ಚಿಂತಿಸುವ ಶಕ್ತಿಯನ್ನು…

Read More

ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ

ನನ್ನ ಬಾಲ್ಯಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ