Advertisement

Tag: Short story

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್‌ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಸಮನ್ವಿತ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ನರೇಂದ್ರ ಪೈ ಕತೆ

ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ.ನಾ.ಮೊಗಸಾಲೆ ಕತೆ

ದಾಸಣ್ಣಚಾರ್ಯರ ಮುಖ ಪೇಲವವಾಯ್ತು. ‘ಛೆ!’ ಎಂದರು. ಆಮೇಲೆ ಮೆತ್ತಗೆ ‘ಇವಳಿಗೆ ಏನಾದರೂ ಈ ವಿಷಯ ತಿಳಿದರೆ, ಬೆಂಕಿ ಇಟ್ಟಾಳು ನನ್ನ ತಲೆಗೆ. ಆಕೆಗೆ ದನಕರು ಅಂದರೆ ದೇವರು. ಗಬ್ಬ ನಿಲ್ಲದಿದ್ದರೆ ಬೇಡ, ಹಟ್ಟಿಯಲ್ಲೇ ಇರಲಿ ಎಂದು ಆಕೆ ಅಮೇರಿಕೆಯಲ್ಲಿರುವಾಗಲೇ ಹೇಳಿದ್ದಳು. ಆದರೆ, ನನಗೆ ಗಬ್ಬ ನಿಲ್ಲದ ಮೇಲೆ ಸಾಕುವುದು ವ್ಯರ್ಥ ಎಂಬ ಭಾವನೆ ಬಂತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಡಾ. ನಾ. ಮೊಗಸಾಲೆ ಬರೆದ ಕತೆ “ನುಗ್ಗೆಗಿಡ”

Read More

ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ”

ಅವನ ಮನೆಯಿಂದ ಹೊರಬಿದ್ದು ಆಫೀಸಿಗೆ ನುಗ್ಗಿ ಕಂದಸ್ವಾಮಿ ಸಾವ್ಕಾರ್ರನ್ನ ಭೇಟಿ ಮಾಡಲು ಕೇಳಿಕೊಂಡಳು. ಮ್ಯಾನೇಜರ್ ಸೀಟಿನಲ್ಲಿ ಕೂತ ಕಂದಸ್ವಾಮಿ ಎಲ್ಲವನ್ನೂ ಆಲಿಸಿದ. ಎರಡು ಬಾರಿ ಅನಿಮೇಶನಿಗೆ ಫೋನ್ ಮಾಡಿದರೂ ಅವನು ಫೋನ್ ಎತ್ತಲಿಲ್ಲ. ‘ನಿಂಗಾಗಿದ್ದು ಅನ್ಯಾಯ ಭಾಗಿ. ನಾನು ಇದನ್ನ ನ್ಯಾಯಯುತವಾಗೇ ಬಗೆಹರಿಸುತ್ತೇನೆ. ನಿನ್ನ ತಮ್ಮ ಬೇರೆ ಅನಾಹುತ ಕೆಲಸಗಾರ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಕತೆ

ಅಪ್ಪ ಒಂದುಕಟ್ಟು ಬೀಡಿ ಮುಗಿಸಿದ್ದ. ಆತ ಎದ್ದು ಇನ್ನೂ ಬಾರಕೋಲು ತಗೊಂಡಿರಲಿಲ್ಲ, ನಾನೂ, ಸಾಂತ ಕೀಲಿಕೊಟ್ಟ ಗೊಂಬೆಗಳಂತೆ ಹೊಯ್ಕೊಳ್ಳಕೆ ಶುರು ಮಾಡಿದೆವು. ಅಪ್ಪನ ಸಿಟ್ಟು ನಮ್ಮ ಮೇಲೆ ವರ್ಗಗೊಂಡಿತು. ಇಬ್ಬರ ಬೆನ್ನಿಗೊಂದೊಂದು ಜೋರಾಗಿ ಗುದ್ದುಕೊಟ್ಟ. ನನಗಂತು ಅಳಲಿಕ್ಕೆ ಉಸುರು ಇಲ್ಲದಂಗಾಗಿತ್ತು. ಅವ್ವ ಅವತ್ತು ಉದಗಳ್ಳಿ ತಗಂಡು ಬೀಸಿದಳು ಅಪ್ಪನಿಗೆ. ಆತನ ಮೊಣಕಾಲಿಗೊಂದು ಗಿಚ್ಚ ಕುಂತಿತು. ಧಾರಾಕಾರ ರಕ್ತ ಸುರಿಯತೊಡಗಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಬರೆದ ಕತೆ “ವಜ್ರಮುನಿ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ