Advertisement

Tag: Short story

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು.
ಡಾ. ಸುಭಾಷ್‌ ಪಟ್ಟಾಜೆ ಬರೆದ ಈ ಭಾನುವಾರದ ಕತೆ “ಹುಟ್ಟು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ವಿಚಾರ, ನಿಲುವುಗಳು, ಆಡಳಿತದ ಅನುಭವ ಇದೆಲ್ಲ ಏನೇ ಇದ್ದರೂ ಶಿವಗಾಮಿ ಹಣದ ವಿಚಾರದಲ್ಲಿ ಶುದ್ಧಹಸ್ತಳಾಗಿಯೇ ಉಳಿದಿದ್ದು, ಹೈ ಕಮಾಂಡ್‌ ತಂತ್ರಗಾರಿಕೆ, ರಾಜಕೀಯ ಪಕ್ಷಗಳು ಕೆಲಸ ಮಾಡುವ ರೀತಿ ನೀತಿಗಳಿಗೆ ಹೊಸಬರಾಗಿದ್ದರು. ಇವಳು ಸೇರಿದ್ದ ಪಕ್ಷದ ರಾಷ್ಟ್ರೀಯ ನಾಯಕಿಗೆ ಶಿವಗಾಮಿಯಷ್ಟು ವಿದ್ಯಾವಂತೆ, ಪ್ರತಿಭಾವಂತೆ ಚುನಾವಣಾ ರಾಜಕೀಯದಲ್ಲೂ ಗೆದ್ದುಬಿಟ್ಟರೆ ಒಂದಲ್ಲ ಒಂದು ದಿನ ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕದಿಂದ ಬೇಕು ಬೇಕೆಂದೇ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸಿದಳು.
ಕೆ. ಸತ್ಯನಾರಾಯಣ ಅವರ “ಮನುಷ್ಯರು ಬದಲಾಗುವರೆ” ಕಥಾ ಸಂಕಲನದ “ಶಿವಗಾಮಿ ಬದಲಾದಳೆ?” ಕಥೆ

Read More

ಭಾರತಿ ಬಿ.ವಿ. ಅನುವಾದಿಸಿದ ಮಾಂಟೋನ ಕತೆ “ದಾದಾ ಮಮ್ಮದ್”

ಬಾಗಿಲು ತೆರೆಯಿತು. ಒಬ್ಬ ಸಣಕಲು ಮನುಷ್ಯ ಒಳ ಬಂದ. ಮೊದಲ ನೋಟದಲ್ಲೇ ಅವನ ಮೀಸೆ ನನ್ನ ಗಮನ ಸೆಳೆಯಿತು. ನಿಜಕ್ಕೂ ಹೇಳಬೇಕೆಂದರೆ ಅವನ ಮೀಸೆಯಿಂದಲೇ ಅವನು ಎದ್ದು ಕಾಣುತ್ತಿದ್ದ, ಅದಿಲ್ಲದಿದ್ದರೆ ಯಾರೂ ಅವನ ಕಡೆಗೆ ಗಮನ ನೀಡದಂತಿದ್ದ ಆ ವ್ಯಕ್ತಿ. ಅವನು ತನ್ನ ಕೈಸರ್ ವಿಲ್ಹೆಮ್‌ ಮೀಸೆಯನ್ನು ಬೆರಳಿನಿಂದ ತೀಡಿಕೊಳ್ಳುತ್ತ ನನ್ನ ಮಂಚದ ಬಳಿ ಬಂದ. ಅವನ ಹಿಂದೆಯೇ ಒಂದಿಷ್ಟು ಜನರು ಒಳಬಂದರು. ಸಾದತ್‌ ಹಸನ್ ಮಾಂಟೋನ ಕತೆಗಳನ್ನು ಭಾರತಿ ಬಿ.ವಿ. “ಯಕ್..” ಎನ್ನುವ ಸಂಕಲನದ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕತೆ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!
ಎ.ಬಿ. ಪಚ್ಚು ಬರೆದ ಕಥೆ “ಪೌರ್ಣಮಿ” ನಿಮ್ಮ ಈ ಭಾನುವಾರದ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ