ಕನಕಗಿರಿಯ ಲಕ್ಷ್ಮೀನರಸಿಂಹ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.”
ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹತ್ತೊಂಭತ್ತನೆಯ ಕಂತು